ಚಿತ್ರ: ಕವಿರತ್ನ ಕಾಳಿದಾಸ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಡಾ. ರಾಜ್‍ಕುಮಾರ್, ವಾಣಿ ಜಯರಾಂ

ಓ.... ಓ....ಓ ಪ್ರಿಯತಮಾ ||೨||
ಪ್ರಿಯತಮಾ..
ಕರುಣೆಯಾ ತೋರೆಯಾ ||೩||
ಸನಿಹಕೇ ಬಾರೆಯಾ

ತೀರಿಸೀ ಬಯಕೆಯಾ
ಜೀವವಾ ಉಳಿಸೆಯಾ
ಪ್ರಿಯತಮಾ
ಓ.... ಓ.... ಪ್ರಿಯತಮಾ
ಹಗಲಲೀ ಇರುಳಲೀ ಕನಸಲೀ ಮನಸಲೀ ||೨||
ಬಳಲಿದೆ ಬೆಚ್ಚಿದೆ ನೆನಪಿನ ಸುಳಿಯಲಿ

ಬೆವರುತ ಚಳಿಯಲಿ ಬೆದರುತ ಭಯದಲಿ ||೨||
ವಿರಹದಾ ಉರಿಯಲಿ ಬೆಂದೆನೂ ನೋವಲಿ
ಯಾರಿಗೆ ಹೇಳಲಿ ಏನನು ಮಾಡಲಿ ||೨||

ಪ್ರಿಯತಮಾ ಓ... ಓ....ಓ ಪ್ರಿಯತಮಾ

ಓ.... ಓ....ಓ ಪ್ರಿಯತಮೇ ||೨||

ಕರುಣೆಯಾ ತೋರೆಯಾ ||೩||

ಸನಿಹಕೇ ಬಾರೆಯಾ
ತೀರಿಸೀ ಬಯಕೆಯಾ
ಜೀವವಾ ಉಳಿಸೆಯಾ
ಪ್ರಿಯತಮೇ ಓ..... ಓ.....ಓ ಪ್ರಿಯತಮೇ

ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ ||೨||
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ ||೨||

ವಿರಹದಾ ಗೀತೆಯಾ ಹಾಡಿದೆ ಕಿವಿಯಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ ||೨||

ಪ್ರಿಯತಮೇ ಓ... ಓ...ಓ ಪ್ರಿಯತಮೇ

ಓ.... ಓ....ಓ ಪ್ರಿಯತಮಾ
ಓ.... ಓ....ಓ ಪ್ರಿಯತಮೇ
ಓ.... ಓ....ಓ ಪ್ರಿಯತಮಾ
ಓ.... ಓ....ಓ ಪ್ರಿಯತಮೇ

Category: ಕನ್ನಡ ಚಿತ್ರಸಾಹಿತ್ಯ
Category: ಕವಿರತ್ನ ಕಾಳಿದಾಸ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ